Skip to main content

ಪಡೆದವರು ಕೊಡುವರಾದರೆ ಸಾಕು...

ಮುಗಿಲ ಮುಗುಳ ಮುಡಿದು ಮೆರೆವ
ಮಲೆಯ ಮುಡಿಗೆ ಎರೆದು ಹರಿವ
ಧಾರೆಯರಸಿ ದಾರಿಯರಸಿ ಚಾರಣ...
ಆ ಸ್ಮೃತಿ ಕೂಡ ಸಂತಸಕೆ ಕಾರಣ.

ಅಗಾಧ ನಿಗೂಢ ಹಸಿರು ವಸ್ತ್ರ ಮಡಿಕೆ
ಪದರಗಳಲಿ ಮಧು ಕಿತ್ತಳೆ ಕಾಫಿ ಅಡಿಕೆ;
ಬಿಸಿಲು, ನೆರೆಳು, ಮಾರುತನ ಕೊರಳು,
ಅಲ್ಲದಾವ ಚಿಂತೆ ಅಲ್ಲದಾವ ಅಳಲು?

ಇಲ್ಲಿನ ಪಟುಗಳಿಗೆ ಪದಕಗಳೆ ಆಭರಣ,
ಇಲ್ಲಿನ ಯೋಧರದೋ ಸಮರ ಪಣ; 
ಇವರ ತವರಲೆ ಇದಾವ ರಣಕಹಳೆ?
ಪಿತೂರಿಯೋ, ಶಾಪವೋ, ಏನೀ ಮಳೆ?

ನಾವು ಸವಿವ ಕಾವೇರಿಯ ಹನಿಹನಿಯು,
ಇಂದು ಕೊಡವರ ಮೂಕ ಕಂಬನಿಯು;
ಮಲೆಯ ಮನೆಗೆ ನಮ್ಮ ನೆರವು ಬೇಕು,
ಪಡೆದವರೆಲ್ಲಾ ಕೊಡುವರಾದರೆ ಸಾಕು.

Comments