ತೀರದ ತೀರದಿ ಒಣಗಿಹುದೆಲ್ಲ,
ನದಿಯ ನಲ್ಮೆಯ ಸ್ಪರ್ಷವಿಲ್ಲ;
ಸೋರದ ಮೋಡದ ಒಡಲು,
ಸುಡುತಿಹುದದರ ನೆರಳು;
ಇರದ ನೀರ ಮೇಲಾವ ಹಕ್ಕು,
ತಕ್ಕಡಿಯ ತಂತಿಗೂ ತಾಕೀತೆ ತುಕ್ಕು?
ನದಿಯ ನಲ್ಮೆಯ ಸ್ಪರ್ಷವಿಲ್ಲ;
ಸೋರದ ಮೋಡದ ಒಡಲು,
ಸುಡುತಿಹುದದರ ನೆರಳು;
ಇರದ ನೀರ ಮೇಲಾವ ಹಕ್ಕು,
ತಕ್ಕಡಿಯ ತಂತಿಗೂ ತಾಕೀತೆ ತುಕ್ಕು?
ಅರ್ಜಿ ಸಲ್ಲಿಸಿದ್ದು ಆಯಿತು,
ಅರಿಕೆ, ಆಗ್ರಹವೂ ಆಯಿತು,
ನದಿಯಂತೆಯೆ ನಂದಿದೆ ದನಿಯೂ,
ಆರಿದ ಕೊರಳಿಗೆ ಇಲ್ಲವು ಹನಿಯೂ;
ಪಾನಕ್ಕೆ ಇರದು ಪೈರಿಗೆ ಏಕೆ?
ಬೆಳೆಗೆರೆದು ನಾವು ಸೊರಗಬೇಕೆ?
ಅರಿಕೆ, ಆಗ್ರಹವೂ ಆಯಿತು,
ನದಿಯಂತೆಯೆ ನಂದಿದೆ ದನಿಯೂ,
ಆರಿದ ಕೊರಳಿಗೆ ಇಲ್ಲವು ಹನಿಯೂ;
ಪಾನಕ್ಕೆ ಇರದು ಪೈರಿಗೆ ಏಕೆ?
ಬೆಳೆಗೆರೆದು ನಾವು ಸೊರಗಬೇಕೆ?
ನಾಯಕ, ನ್ಯಾಯವಾದಿ ತೊರೆದರೆ,
ಯಾರಾಲಿಸುವರು ನಮ್ಮಯ ಮೊರೆ?
ವರುಣನ ಓಲೈಸಿ ವರ ಬೇಡಬೇಕೆ?
ವಿಜ್ಞಾನದ ವಿಸ್ಮಯಕೆ ಕಾಯಬೇಕೆ?
ಎಲ್ಲಿ ಅಡಗಿದೆ ಐಕ್ಯತೆ, ಒಗಟ್ಟು,
ಭಾವಕೇಕೆ ಭಾಷೆಯ ಅಣೆಕಟ್ಟು?
ಯಾರಾಲಿಸುವರು ನಮ್ಮಯ ಮೊರೆ?
ವರುಣನ ಓಲೈಸಿ ವರ ಬೇಡಬೇಕೆ?
ವಿಜ್ಞಾನದ ವಿಸ್ಮಯಕೆ ಕಾಯಬೇಕೆ?
ಎಲ್ಲಿ ಅಡಗಿದೆ ಐಕ್ಯತೆ, ಒಗಟ್ಟು,
ಭಾವಕೇಕೆ ಭಾಷೆಯ ಅಣೆಕಟ್ಟು?
Comments