ಮಳೆಯ ಗೆಜ್ಜೆನಾದ,
ನನ್ನ ಎದೆ ಬಡಿತ,
ಮೋಡ ಮರೆಯಾದ
ಮೇಲೆಲ್ಲಿ ಕುಣಿತ?
ಇಂಗದಾ ಇಂಗಿತ,
ಹೊತ್ತು ನಡೆವೆ,
ಸ್ವಪ್ನ ವರ್ಣರಂಜಿತ,
ಆಳ ಕಾಲ ಕಣಿವೆ.
ದಾಟು ನಿನ್ನಲಿ ಬೇಡಿ,
ನಿರೀಕ್ಷೆ ಮೆರೆವೆ,
ನಿನಗೆ ಕಾಣಿಕೆ ನೀಡಿ,
ನಿನ್ನನೇ ಮರೆವೆ.
ಎಲ್ಲವನ್ನುಳ್ಳವ ನೀನು,
ನಿನಗೇನು ಕೊರತೆ?
ನೀರಿಗೆ ಬೇಕೆ ಮೀನು,
ಹೆಮ್ಮರಕೆ ಹೂಲತೆ?
ಕೊಂಚ ನನ್ನಯ ಅರಿವು,
ಕ್ಷುದ್ರ ನನ್ನಯ ಅರಿಕೆ,
ತಲೆ ಬಾಗಿತೇ ಮರವು?
ನೆರಳ ನೀಡಿತೆ ಗರಿಕೆ?
ನನ್ನ ಎದೆ ಬಡಿತ,
ಮೋಡ ಮರೆಯಾದ
ಮೇಲೆಲ್ಲಿ ಕುಣಿತ?
ಇಂಗದಾ ಇಂಗಿತ,
ಹೊತ್ತು ನಡೆವೆ,
ಸ್ವಪ್ನ ವರ್ಣರಂಜಿತ,
ಆಳ ಕಾಲ ಕಣಿವೆ.
ದಾಟು ನಿನ್ನಲಿ ಬೇಡಿ,
ನಿರೀಕ್ಷೆ ಮೆರೆವೆ,
ನಿನಗೆ ಕಾಣಿಕೆ ನೀಡಿ,
ನಿನ್ನನೇ ಮರೆವೆ.
ಎಲ್ಲವನ್ನುಳ್ಳವ ನೀನು,
ನಿನಗೇನು ಕೊರತೆ?
ನೀರಿಗೆ ಬೇಕೆ ಮೀನು,
ಹೆಮ್ಮರಕೆ ಹೂಲತೆ?
ಕೊಂಚ ನನ್ನಯ ಅರಿವು,
ಕ್ಷುದ್ರ ನನ್ನಯ ಅರಿಕೆ,
ತಲೆ ಬಾಗಿತೇ ಮರವು?
ನೆರಳ ನೀಡಿತೆ ಗರಿಕೆ?
Comments