ಏನು ನಿನ್ನಯ ಚಿಂತೆ,
ಎನ್ನ ಭಾವ ಸಿರಿವಂತೆ?
ನೀನೆ ಸಂತಸದ ಜಿನುಗು,
ನೀನೆ ಮೂಡಲ ಮಿನುಗು...
ಕಂಗಳಲಿ ತಿಳಿಗೊಳ,
ಹಣೆಯ ಮರಳ ಸುಕ್ಕು,
ಬಾಡದಿರಲೀ ಮೊಗದಳ,
ಹಾಳು ಕಳವಳ ಹೊಕ್ಕು...
ಏನು ನಿನ್ನಯ ಚಿಂತೆ,
ಎನ್ನ ಭಾವ ಸಿರಿವಂತೆ?
ನೀನೆ ಆನಂದದಾಗರ,
ನೀನೆ ಸಹನೆಯ ಸಾಗರ...
ಹರುಷದ ಹಸುಗೂಸೆ,
ನವಿರು ನಿನ್ನಯ ನಗು,
ಸಾಟಿಯಿಲ್ಲದ ಸೊಗಸೆ,
ಬೇಕೆ ಬೇರೆ ಬೆರಗು?
ಏನು ನಿನ್ನಯ ಚಿಂತೆ,
ಎನ್ನ ಭಾವ ಸಿರಿವಂತೆ?
ನೀನೆ ಸ್ಪೂರ್ತಿಯ ಸೆಲೆ ,
ನೀನೆ ಎನ್ನಾಲದೆಲೆ...
ಬಾಳಿನೊಂದೇ ಬಗಸೆ,
ನೀ ನೀಡಿ ನನ್ನುಳಿಸು,
ಮಾಟವಿಲ್ಲದ ಮನಸೆ,
ಒಳಿತ ನನ್ನಲೂ ಒಲಿಸು...
ಏನು ನಿನ್ನಯ ಚಿಂತೆ,
ಎನ್ನ ಭಾವ ಸಿರಿವಂತೆ?
ನೀನೆ ಸೃಷ್ಟಿಯ ಸೊಬಗು,
ನೀನೆ ಮಂಗಳದ ಮೆರುಗು..
ಎನ್ನ ಭಾವ ಸಿರಿವಂತೆ?
ನೀನೆ ಸಂತಸದ ಜಿನುಗು,
ನೀನೆ ಮೂಡಲ ಮಿನುಗು...
ಕಂಗಳಲಿ ತಿಳಿಗೊಳ,
ಹಣೆಯ ಮರಳ ಸುಕ್ಕು,
ಬಾಡದಿರಲೀ ಮೊಗದಳ,
ಹಾಳು ಕಳವಳ ಹೊಕ್ಕು...
ಏನು ನಿನ್ನಯ ಚಿಂತೆ,
ಎನ್ನ ಭಾವ ಸಿರಿವಂತೆ?
ನೀನೆ ಆನಂದದಾಗರ,
ನೀನೆ ಸಹನೆಯ ಸಾಗರ...
ಹರುಷದ ಹಸುಗೂಸೆ,
ನವಿರು ನಿನ್ನಯ ನಗು,
ಸಾಟಿಯಿಲ್ಲದ ಸೊಗಸೆ,
ಬೇಕೆ ಬೇರೆ ಬೆರಗು?
ಏನು ನಿನ್ನಯ ಚಿಂತೆ,
ಎನ್ನ ಭಾವ ಸಿರಿವಂತೆ?
ನೀನೆ ಸ್ಪೂರ್ತಿಯ ಸೆಲೆ ,
ನೀನೆ ಎನ್ನಾಲದೆಲೆ...
ಬಾಳಿನೊಂದೇ ಬಗಸೆ,
ನೀ ನೀಡಿ ನನ್ನುಳಿಸು,
ಮಾಟವಿಲ್ಲದ ಮನಸೆ,
ಒಳಿತ ನನ್ನಲೂ ಒಲಿಸು...
ಏನು ನಿನ್ನಯ ಚಿಂತೆ,
ಎನ್ನ ಭಾವ ಸಿರಿವಂತೆ?
ನೀನೆ ಸೃಷ್ಟಿಯ ಸೊಬಗು,
ನೀನೆ ಮಂಗಳದ ಮೆರುಗು..
Comments