ಆಸೆಯಿಂದ ಜನಿಸಿದ ಜಂತು,
ಕ್ಷುಲ್ಲಕ್ಕ ನಾನಿದಕೆರೆವ ಪ್ರತಿ ಕಂತು;
ಇದು ನಿಮಗೆ ಏನು ನೀಡಬಹುದು?
ಪಡೆವ ಹಂಬಲವಷ್ಟೇ ಇದಕಿಹುದು...
ಮುದ ನೀಡು, ನಗು ಹರಡು,
ಎಂದರು ಪ್ರೇಮಮಯಿ ಸಂತರು;
ಇದು ಆಸೆ ರಚಿಸಿರುವ ಕರಡು,
ಕ್ಷಣಿಕವಿದರ ಸಂತಸದ ತುಂತುರು...
ನಿಮ್ಮ ಪಡೆವುದೇ ಗುರಿಯಾದರೆ,
ಸ್ವಾರ್ಥ ಎದೆಯ ಹೊಕ್ಕರೆ,
ಪ್ರೀತಿ ಪಜೀತಿಯಾಗಲು,
ಪ್ರೇಯಸಿಯ ಪಾಲಿಗೆಲ್ಲಿ ಅಕ್ಕರೆ?
ನಿಮ್ಮಾಕಾಂಕ್ಷೆಯ ತಡೆಗಟ್ಟಿ,
ನಿಮ್ಮ ಹಿತವ ಬಯಸಬಹುದೆ?
ಆಸೆಯ ಭವ್ಯ ಭವನ ಕಟ್ಟಿ,
ಗೃಹಬಂಧನದಲ್ಲಿ ನಿಮ್ಮನಿರಿಸಬಹುದೆ?
ನಿಮ್ಮ ಮುಗ್ಧ ಮುಗುಳುನಗೆಯ ಕಳೆದು,
ಇನ್ನೇನು ಪಡೆದರೆ ತಾನೆ ಏನು?
ದಿನವಿಡೀ ದುಡಿದು, ಎಲ್ಲೆಡೆ ಅಲೆದು,
ಸಿಹಿಯ ಸವಿಯದಂತೆ ಜೇನು...
ಕ್ಷುಲ್ಲಕ್ಕ ನಾನಿದಕೆರೆವ ಪ್ರತಿ ಕಂತು;
ಇದು ನಿಮಗೆ ಏನು ನೀಡಬಹುದು?
ಪಡೆವ ಹಂಬಲವಷ್ಟೇ ಇದಕಿಹುದು...
ಮುದ ನೀಡು, ನಗು ಹರಡು,
ಎಂದರು ಪ್ರೇಮಮಯಿ ಸಂತರು;
ಇದು ಆಸೆ ರಚಿಸಿರುವ ಕರಡು,
ಕ್ಷಣಿಕವಿದರ ಸಂತಸದ ತುಂತುರು...
ನಿಮ್ಮ ಪಡೆವುದೇ ಗುರಿಯಾದರೆ,
ಸ್ವಾರ್ಥ ಎದೆಯ ಹೊಕ್ಕರೆ,
ಪ್ರೀತಿ ಪಜೀತಿಯಾಗಲು,
ಪ್ರೇಯಸಿಯ ಪಾಲಿಗೆಲ್ಲಿ ಅಕ್ಕರೆ?
ನಿಮ್ಮಾಕಾಂಕ್ಷೆಯ ತಡೆಗಟ್ಟಿ,
ನಿಮ್ಮ ಹಿತವ ಬಯಸಬಹುದೆ?
ಆಸೆಯ ಭವ್ಯ ಭವನ ಕಟ್ಟಿ,
ಗೃಹಬಂಧನದಲ್ಲಿ ನಿಮ್ಮನಿರಿಸಬಹುದೆ?
ನಿಮ್ಮ ಮುಗ್ಧ ಮುಗುಳುನಗೆಯ ಕಳೆದು,
ಇನ್ನೇನು ಪಡೆದರೆ ತಾನೆ ಏನು?
ದಿನವಿಡೀ ದುಡಿದು, ಎಲ್ಲೆಡೆ ಅಲೆದು,
ಸಿಹಿಯ ಸವಿಯದಂತೆ ಜೇನು...
Comments