ಕಾರ್ಮೊಡಗಳ ಸುಳಿಯಲ್ಲೇ
ಅಡಗಿಹುದು ಕಾಂತಿ,
ಏಕಾಂಗಿ ಎದೆಯ ಚಳಿಯಲ್ಲೇ,
ಮೂಡುವುದು ಅಮರ ಶಾಂತಿ.
ಮತಿಗೆಟ್ಟು ಮರುಗುವುದು
ಆಜೀವ ಯಾತನೆಯು,
ಆಜೀವ ಯಾತನೆಯು,
ಸಲಹದಿರೆ ಸೊರಗುವುದು
ಭಾವನೆಯ ತೆನೆಯು;
ಛಾಯೆಯಲೂ ಸಾಗುವನು,
ಆ ಉತ್ತರಕೆ ರವಿಯು,
ಬದುಕಿನಾಟದಿ ಮಾಗುವನು,
ಅರಿವಿನ ಸವಿಗೂಡಿ ಕವಿಯು.
ಆ ಉತ್ತರಕೆ ರವಿಯು,
ಬದುಕಿನಾಟದಿ ಮಾಗುವನು,
ಅರಿವಿನ ಸವಿಗೂಡಿ ಕವಿಯು.
ಪದವಾಗಿ ಆಟಿಕೆಯು,
ಬಣ್ಣನೆಯೇ ಬಣ್ಣವು,
ಕುಗ್ಗುವುದು ಅಳಲಿಕೆಯು,
ಕಾಣುತಲೆ ಚೆಲುವು;
ಮರುಭೂಮಿಯ ಮಡಿಲಿಗೆ,
ಸಂತಸದ ನೆರೆ ನುಗ್ಗಿ,
ಮನದ ಬಟ್ಟಬಯಲಿಗೆ
ಅಂದೇ, ಆ ದಿನವೆ ಸುಗ್ಗಿ.
Comments