Skip to main content

ಕಲಹ ...

ವರುಷಗಳಾದರೂ ಕಲಹವದು ಹುದುಗಿ,
ಸುಡದೆ, ಹೊಗೆ ಸೂಸದೆ, ತುಸು ಕಾದಿದೆ,
ಸಂದರ್ಭಗಳವು ಬರಲು ಒದಗಿ,
ಸಿಡಿದು, ಹಗೆ ಸಾರಿ, ಮರು ಬಾಳಿದೆ. 

ಇಲ್ಲದೆ ಕಿರಣವೊಂದು ಕಾಡೀತೇ,
ಶೀತಲ, ಅಚಲ ಹಿಮ ಘನವಾ?
ಬಲ್ಲದೆ ಮಾತೊಂದು ಮಾಡೀತೇ, 
ಕ್ರೂರ, ಅಬಲ, ಆ ಸಮ ಮನವಾ?  

ಹೆದರಿ ಕಣ್ಣ್ಮುಚ್ಚಿದ್ದರ ಫಲವಿದು,
ಕಳೆಯದೆ ಕಾಣದಾಗಿದೆ ಕ್ರೋಧ,
ಮುದುರಿ ಬಚ್ಚಿರುವ ಒಲವದು,
ಮೊಳೆಯದೇ ಬಿರಿದು ಈ ರೋಧ?

Comments