ನಾ ಕರೆಯಲು ನೀ ಬಾರದೆ,
ಮನ ಸೆಳೆದರೂ ಮುಖ ತೋರದೆ,
ಎಲ್ಲಿರುವೆಯೇ ಎದುರಾಗದೆ?
ಮನ ಕನಸಿನ ಕರುವಾಗಿರೆ,
ಮುದ ಸವಿಯಲು ಮಾತು ಜಾರಿದೆ,
ಪದ ಜಡಿಯಿದೇ ನುಡಿಯಾಗಿದೆ.
ಸ್ವಪ್ನ ಸ್ವರಕೆಲ್ಲ ನಿನ್ನ ರಾಗವೆ,
ಪ್ರತಿ ಬಯಕೆಯು ಸಾಲು ಸೇರಿದೆ,
ನಿನ್ನ ದನಿಗೂಡದೆ ಇಂಚರ ಮೂಡದೆ.
ಆಸೆ ಮಿನುಗಲಿ ನಿನ್ನ ಅರಸಿಹೆ,
ನಿನ್ನ ಗುಂಗಲೇ ನಾ ಚಲಿಸಿಹೆ,
ಚುಕ್ಕಿ ನೋಡಲು ಹಕ್ಕಿ ಹಾಡದೇ?
ಮನ ಸೆಳೆದರೂ ಮುಖ ತೋರದೆ,
ಎಲ್ಲಿರುವೆಯೇ ಎದುರಾಗದೆ?
ಮನ ಕನಸಿನ ಕರುವಾಗಿರೆ,
ಮುದ ಸವಿಯಲು ಮಾತು ಜಾರಿದೆ,
ಪದ ಜಡಿಯಿದೇ ನುಡಿಯಾಗಿದೆ.
ಸ್ವಪ್ನ ಸ್ವರಕೆಲ್ಲ ನಿನ್ನ ರಾಗವೆ,
ಪ್ರತಿ ಬಯಕೆಯು ಸಾಲು ಸೇರಿದೆ,
ನಿನ್ನ ದನಿಗೂಡದೆ ಇಂಚರ ಮೂಡದೆ.
ಆಸೆ ಮಿನುಗಲಿ ನಿನ್ನ ಅರಸಿಹೆ,
ನಿನ್ನ ಗುಂಗಲೇ ನಾ ಚಲಿಸಿಹೆ,
ಚುಕ್ಕಿ ನೋಡಲು ಹಕ್ಕಿ ಹಾಡದೇ?
Comments